Home

  


                                                                       

ಹರಿಹರ ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕ ರಾಜ್ಯದ ಮಧ್ಯದಲ್ಲಿದೆ. ಈ ಕಾರಣದಿಂದಾಗಿ ಇದನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡುವ ವಿಚಾರವಿತ್ತಂತೆ. ತುಂಗಭದ್ರಾ ನದಿಯು ಇಡೀ ಜಿಲ್ಲೆಯ ಜೀವನದಿಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು ೨೭೫ ಕಿ.ಮಿ.ದೂರದಲ್ಲಿದೆ. ಇದು ರಾಷ್ಟ್ರೀಯ ಹೆದ್ದಾರಿ ೪ (ಪೂನಾ-ಬೆಂಗಳೂರು) ರಲ್ಲಿದೆ.

ಇದನ್ನು ದೇವಸ್ಥಾನಗಳ ಊರೆಂದು ಕರೆಯಬಹುದು. ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಾಗಿ ಈ ಊರು ಸಾಕಷ್ಟು ಜನರಿಗೆ ಜೀವನಾಧಾರವಗಿತ್ತು. ಇಲ್ಲಿನ ಪ್ರಮುಖ ಕೈಗಾರಿಕಾ ಸಂಸ್ಥೆಗಳಲ್ಲಿ ಉಲ್ಲೇಖನೀಯವಾದವುಗಳೆಂದರೆ, ಮೈಸೂರ್ ಕಿರ್ಲೋಸ್ಕರ್ ಲಿಮಿಟೆಡ್ (ಮೆಷಿನ್ ಟೂಲ್) ಕಾರ್ಖಾನೆ (ಈಗ ಮುಚ್ಚಲಾಗಿದೆ) ಹಾಗು ಹರಿಹರ ಪಾಲಿಫೈಬರ್ಸ್ (ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್).

ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ, ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನ. ಹರಿಹರೇಶ್ವರ ಸ್ವಾಮಿಯು ಇರುವುದರಿಂದ ಊರಿಗೆ ಹರಿಹರ ಎಂದು ಹೆಸರು ಬಂದಿತು. ಇಸವಿ ೧೨೨೪ರಲ್ಲಿ ಹೊಯ್ಸಳ ದೊರೆ ೨ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಈ ದೇವಾಲಯವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಮುಖಮಂಟಪವೇ ಸುಖನಾಸಿ. ಮುಖಮಂಟಪದಲ್ಲಿ ೬೦ ಕಲಾತ್ಮಕ ಕಂಬಗಳ ರಚನೆಯಿದೆ. ಇವು ಹೊಯ್ಸಳ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣಿಸುವ ಕಂಬಗಳು. ದೇವಾಲಯದ ಮುಂದೆ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪಸ್ತಂಭಗಳಿವೆ. ಈ ಎರಡೂ ದೀಪಸ್ತಂಭಗಳ ಬುಡದಲ್ಲಿ ಸಣ್ಣ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.

ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರನಾಗಿದೆ. ಇದೇ ಕಾರಣದಿಂದ ದೇವಾಲಯದಲ್ಲೆಲ್ಲೂ ನಂದಿ ಕಾಣಸಿಗುವುದಿಲ್ಲ. ಆದರೆ ಹರಿಹರೇಶ್ವರ ದೇವಾಲಯದ ಬಲಕ್ಕೆ ಗರ್ಭಗುಡಿಗೆ ಸಮಾನಾಂತರವಾಗಿ ಸಣ್ಣದಾದ ಶಿವ ದೇವಾಲಯವೊಂದಿದೆ. ನಂದಿ ಈ ಸಣ್ಣ ದೇವಾಲಯದ ಹೊರಗಡೆ ಆಸೀನನಾಗಿದ್ದಾನೆ. ಅಲ್ಲೇ ಮುಂದೆ ರಾಮೇಶ್ವರನ ಗುಡಿಯೊಂದಿದೆ. ದೇವಾಲಯದ ಗೋಪುರ ಸುಣ್ಣ ಬಳಿದಿರುವ ಕಾರಣ ನೋಡಲು ಯೋಗ್ಯವಾಗಿಲ್ಲ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು ೭ ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.

2001 ರ ಜನಗಣತಿಯ ಪ್ರಕಾರ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 73, 046 ಜನಸಂಖ್ಯೆಯನ್ನು ಹೊಂದಿರುತ್ತದೆ.   ಹರಿಹರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ ಗಳಿದ್ದು ,31 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. 

 

Harihar  is a city located in the Indian state of Karnataka. Harihar also spelled Hari-hara, in Hinduism, a syncretic deity, combining the two major gods, Vishnu (Hari) and Siva (Hara). Images of Harihara (also known as Sambhu-Visnu and Sankara-Narayana, variants of the names of the two gods) began to appear in the classicalperiod after sectarian movements, which elevated one god as supreme over the others, had waned sufficiently for efforts at compromise to be attempted.    

 The beautiful 4 feet height idol is a powerful combination of the protector (Hara / Lord Vishnu) and the destroyer (Lord Shiva). The deity is also known as Shankarnarayana and Sambhu-Vishnu.This place is also known as Dakshina Kashi / Southern Kashi. On the right side of Harihara idol is carved Shiva’s trishul and the hair styled as an ascetic and on the left side Vishnu is carved with the discus and head is covered with a crown. This marvelous stone carved temple is visited by both Vaishnavaites and Shaivites.

 

 

This Page is Maintained by B.Mohan RO Phone No.9480024455


Last updated 0n 19-12-2011


 


 

 

No. Of Visitors :
Last Updated   : 16/02/2012  Release History
Release 2.0.0, Powered By Karnataka Municipal Data Society & maintained by Harihara CMC
This website can best viewed with the resolution 1024 * 768 using Internet Explorer 7.0 or above.
Valid CSS!